Vijayanagara Express

Kannada News Portal

ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ ವಿಜಯನಗರ ಎಸ್ಪಿ, ಶ್ರೀಹರಿಬಾಬು

1 min read

ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ ವಿಜಯನಗರ ಎಸ್ಪಿ, ಶ್ರೀಹರಿಬಾಬು

ಹರಪನಹಳ್ಳಿ : 15 , ಬುಧವಾರ ಪಟ್ಟಣದ ಡಿ ವೈಎಸ್ ಪಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕರ ಜನ ಸಂಪರ್ಕ ಸಭೆ ,ಜನರ ಕುಂದು ಕೊರತೆಗಳ ಸಭೆ, ಉದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಮ್ಮ ಗಮನಕ್ಕೆ ತಂದರೆ ಅವುಗಳನ್ನು ಸರಿಪಡಿಸುವ ಉದ್ದೇಶದಿಂದ ಒಂದು ವೇಳೆ ನಮ್ಮ ವ್ಯಾಪ್ತಿಗೆ ಬರದಿದ್ದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಅವರ ಸಹಕಾರದೊಂದಿಗೆ ಅವುಗಳನ್ನು ಸರಿಪಡಿಸಲು ಪ್ರಯತ್ನ ಪಡುತ್ತೇವೆ ಎಂಬ ಭರವಸೆಯನ್ನು ನೀಡುತ್ತಿದ್ದೇವೆ ಎಂದರು .

ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು ಅವುಗಳು ನಮ್ಮ ಗಮನಕ್ಕೆ ಬಂದಿದ್ದು ಮಟ್ಕಾ, ಜೂಜು ,ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆ ಕರ್ಕ ಶ ಶಬ್ದಗಳನ್ನು ಬಳಕೆ ಮಾಡುವ ವಾಹನಗಳಿಂದ ಆಗುವ ತೊಂದರೆ , ಮದ್ಯಪಾನವನ್ನು ಅಂಗಡಿ , ಗೂಡ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವುದು, ಕಳ್ಳತನ, ಮೊಬೈಲ್ ಕಳ್ಳತನ,ಪುಟ್ ಒತ್ತುವರಿ ತೆರವು ,ಸಿಸಿ ಕ್ಯಾಮೆರಾದ ನಿರ್ವಹಣೆ, (ಸಿಗ್ನಲ್ )ವೃತ್ತ ಸಂಕೇತಗಳ ನಿರ್ವಹಣೆ ಸೇರಿದಂತೆ ಅನೇಕ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದ್ದು ಇವುಗಳ ಪರಿಹಾರಕ್ಕೆ ತ್ವರಿತ ಕ್ರಮವನ್ನು ವಹಿಸುತ್ತೇವೆ ಹಾಗೂ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಡಿವೈಎಸ್ಪಿ ಹಾಲಮೂರ್ತಿ ರಾವ್ ಅವರಿಗೆ ಸೂಚಿಸಿರುತ್ತೇನೆ ಎಂದು ತಿಳಿಸಿದರು.ಜಿಲ್ಲೆಯಾದ್ಯಂತ ಒಟ್ಟು 16ಜನ ಮಟ್ಕಾ ಬುಕ್ಕಿಗಳನ್ನು ಗಡಿಪಾರು ಮಾಡಲು ಆದೇಶವಾಗಿದ್ದು ಅವರ ಪೈಕಿ 10 ಜನರು ಹರಪನಹಳ್ಳಿ ತಾಲೂಕಿನವರೇ ಆಗಿರುತ್ತಾರೆ ಅವರ ಗಡಿಪಾರಿಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ರೈತ ಹೋರಾಟಗಾರ ವೆಂಕಟೇಶ್ ಎಚ್ ಮಾತನಾಡಿ ತಾಲೂಕಿನಲ್ಲಿ ಜೂಜು ಮಟ್ಕ್ ಅಕ್ರಮವಾಗಿ ಮಧ್ಯಪಾನ ಮಾರಾಟಮಾಡುವುದು ,ಅಕ್ರಮ ಗಣಿಗಾರಿಕೆ ರಾಜಾರೋಷವಾಗಿ ನಡೆಯುತ್ತಿರುವುದನ್ನು ಅನೇಕ ಬಾರಿ ಅಧಿಕಾರಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಅಲ್ಲದೆ ಮೀಟರ್ ಬಡ್ಡಿ ದಂಧೆ ಪಟ್ಟಣದಲ್ಲಿ ವಿಪರೀತವಿದ್ದು ರೈತರಿಗೆ ಸಾಲ ಸಿಗದಂತ ಪರಿಸ್ಥಿತಿ ಎದುರಾಗಿದೆ ಆದುದರಿಂದ ಕೂಡಲೇ ಇವುಗಳ ಬಗ್ಗೆ ನಿಗವಹಿಸಿ ಸೂಕ್ತವಾದ ತನಿಖೆಯನ್ನು ನಡೆಸಿ ತ್ವರಿತವೇ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಕಾರ್ಮಿಕರ ಮುಖಂಡರಾದ ಗುಡಿಹಳ್ಳಿ ಹಾಲೇಶ್ ಮಾತನಾಡಿ
ತಾಲೂಕಿನಲ್ಲಿ ಹಳ್ಳಿಗಳ ಗೂಡಂಗಡಿಗಳಲ್ಲಿ ಮದ್ಯಪಾನ ಸುಲಭವಾಗಿ ಸಿಗುತ್ತಿರುವುದರಿಂದ ಕಡಿಮೆ ವಯಸ್ಸಿನ ಯುವಕರು ಮಹಿಳೆಯರು ಸಹ ಮಧ್ಯಪಾನ ವ್ಯಸನಿಗಳಾಗುತ್ತಿದ್ದಾರೆ ಆದುದರಿಂದ ಕೂಡಲೇ ಇವುಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗಮನಕ್ಕೆ ತಂದರು.

ಯುವ ಮುಖಂಡ ಪಟ್ನಾಮದ.ವೆಂಕಟೇಶ್ ಮಾತನಾಡಿ ಟ್ರಾಫಿಕ್ ನಿಯಮಗಳು ಟ್ರಾಫಿಕ್ ಉಲ್ಲಂಘನೆ ಸಿಗ್ನಲ್ ವ್ಯವಸ್ಥೆ ಫುಟ್ಬಾತ್ ಅತಿಕ್ರಮಣ ಕರ್ಕಶ ಶಬ್ದಗಳ ವಾಹನ ,ಪಾರ್ಕಿಂಗ್ ಇಲ್ಲದ ಜಾಗದಲ್ಲಿ ಪಾರ್ಕಿಂಗ್ ಮಾಡುತ್ತಿರುವುದು, ಇವುಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿದ್ದು ಇದರ ಬಗ್ಗೆ ಕ್ರಮ ವಹಿಸಿ ಸಾರ್ವಜನಿಕರ ಸುಗಮ ಸಂಚಾರ ಹಾಗೂ ಸಾರ್ವಜನಿಕರ ವ್ಯವಸ್ಥಿತವಾದ ಜೀವನಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಹಾರಾಳ್ ಎಚ್ ಎಮ್ ಅಶೋಕ್ ,ಸದಸ್ಯ ಜಾಕೀರ್ ಸರ್ಕವಾಸ್, ಅರಸಿಕೇರಿ ಸಬ್ಇನ್ಸಪೆಕ್ಟರ್ ಕಿರಣ್ ,ಹಲುವಾಗಲು ಪಿ ಎಸ್ ಐ ಗುರುರಾಜ್.ಟಿ, ಚಿಗಟೇರಿ ಪಿಎಸ್ಐ ನಾಗರಾಜ್, ಹರಪನಹಳ್ಳಿ ಪಿಎಸ್ಐ ಶಾಂತಮೂರ್ತಿ ಪೋಲಿಸ್ ಸಿಬ್ಬಂದಿ,
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸೋಮಲಿಂಗಪ್ಪ ಡಿ, ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ್ , ಪೂಜಾರ್ ಮಾರುತಿ, ಮುಖಂಡ ಕಲ್ಲಳ್ಳಿ ಗೋಣಪ್ಪ ಕುಂಬಳಗಟ್ಟಿ ಮಂಜುನಾಥ್ ಅಂಜುಮನ್ ಸಮಿತಿಯ ಮಾಜಿ ಅಧ್ಯಕ್ಷ ಜಾವೀದ್ ಮಂಜುನಾಥ್, ಜಿ ಈಶ್ವರ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *